logo
add image
Blog single photo

ಅಂತಾರಾಜ್ಯ ಕಳ್ಳರ ತಂಡವನ್ನು ಬಂಧಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದಾರೆ

ಹಳಿಯಾಳ: ಜುಲೈ 12 ರಂದು ಮಧ್ಯಪ್ರದೇಶದ ಅಲಿರಾಜಪೂರ ಜಿಲ್ಲೆಯ ಬಡಿಉತ್ತಿ ಗ್ರಾಮದ ಬಹದ್ದೂರಸಿಂಗ್ ರಾಯಚಂದ ಬಿಲವಾ, ಚೊಟಿಉತ್ತಿ ಗ್ರಾಮದ ಇಗ್ರಾಮ ಪಾನಸಿಂಗ ಅಜನರ( 25), ಪುತಲಾಬ ಗ್ರಾಮದ ಸುರಬ್ ದೊಲು ಬುರಿಯಾ (22), ಬಡಿಉತ್ತಿ ಗ್ರಾಮದ ಸುರಮ್ ಕಾಲಿಯಾ ಮಿನಾವಟ್ ಬಿಲ್( 30) ಎಂಬ ಕಳ್ಳರನ್ನು ಕೆಸರೊಳ್ಳಿ ಮತ್ತು ಅಜಗಾವ್ ಗ್ರಾಮಸ್ಥರ ನೆರವಿನಿಂದ ಸೆರೆಹಿಡಿಯಲಾಗಿದೆ. ಬಂಧಿತರಿಂದ ಸುಮಾರು 12 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಕಳ್ಳರ ಪತ್ತೆಗಾಗಿ ಮಧ್ಯಪ್ರದೇಶಕ್ಕೆ ತರಳಿದ್ದ ಪೊಲೀಸರ ವಿಶೇಷ ತಂಡ ಕಳವು ಮಾಲು ಸ್ವೀಕರಿಸಿದ ಅಲಿರಾಜಪುರ ಜಿಲ್ಲೆಯ ನರ್ಮದಾ ನಗರದ ವಿಶಾಲ ರಾಮಚಂದ್ರ ಸೋನಿ ಅಕ್ಕಸಾಲಿಗ, ವಿನೋಬಾ ಮಾರ್ಗದ ಮಹೇಶ ಬಾಲಕುಂದ ಸೋನಿ ಕಾಳು ವ್ಯಾಪಾರಸ್ಥನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹಳಿಯಾಳ ಪೊಲೀಸ್ ಠಾಣೆಗೆ ಸಂಬಂಧಿಸಿದ ಎಂಟು ಪ್ರಕರಣಗಳು, ಕುಮಟಾ, ಶಿರಸಿ, ಕಾರವಾರ, ಹಾಗೂ ದಾವಣಗೆರೆ, ಗಂಗಾವತಿ, ಬಾಗಲಕೋಟೆ, ರಾಮದುರ್ಗ, ಚಿತ್ರದುರ್ಗ, ಜಗಳೂರ, ಹಾವೇರಿ, ಹಿರೇಕೆರೂರ ಹಾಗೂ ಬ್ಯಾಡಗಿ ವ್ಯಾಪ್ತಿಯ ಪ್ರಕರಣಗಳಲ್ಲಿ ಖರೀದಿಸಿದ 322 ಗ್ರಾಂ ಬಂಗಾರ, 4730ಗ್ರಾಂ ಬೆಳ್ಳಿ ಸೇರಿ ಒಟ್ಟು 12 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿ ಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ದಾಂಡೇಲಿ ಡಿವೈಎಸ್ಪಿ ಮೋಹನ ಪ್ರಸಾದ, ಸಿಪಿಐ ಸುಂದ್ರೇಶ ಹೊಳೆಣ್ಣನವರ, ಪಿಎಸ್​ಐ ಆನಂದಮೂರ್ತಿ ಹಾಗೂ ಹಳಿಯಾಳ ಠಾಣೆಯ ಮತ್ತು ಸಿಪಿಐ ಕಚೇರಿಯ ಸಿಬ್ಬಂದಿ

Top