logo
add image
Blog single photo

ಕೆ.ಎಲ್.ಎಸ್ ವಿದ್ಯಾರ್ಥಿಗಳ ಕ್ರೀಡಾ ಸಾಧನೆ

ದಾಂಡೇಲಿಯ ಡಿ ಎಫ್ ಎ ಮೈದಾನದಲ್ಲಿ ಆಗಸ್ಟ್ 9 ಹಾಗೂ 10 ರಂದು ನಡೆದ ಹಳಿಯಾಳ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಹಳಿಯಾಳದ ಕೆ.ಎಲ್.ಎಸ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ವಿದ್ಯಾರ್ಥಿಗಳು ಗುಂಪು ಆಟದಲ್ಲಿ ಬಾಲಕರ ವಾಲಿಬಾಲ್ ,ಬಾಲಕಿಯರ ಥ್ರೋಬಾಲ್ , ಬ್ಯಾಡ್ಮಿಂಟನ್ ಹಾಗೂ ಯೋಗದಲ್ಲಿ ಪ್ರಥಮ ಸ್ಥಾನ ಪಡೆದಿದ್ಧಾರೆ .

ವೈಯಕ್ತಿಕ ವಿಭಾಗದಲ್ಲಿ ಕು. ಶ್ರದ್ಧಾ ಬೆಳಗಾಂವಕರ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಹಾಗೂ ಚಕ್ರ ಎಸೆತದಲ್ಲಿ ತೃತೀಯ ಸ್ಥಾನ ಮತ್ತು ಕು.ಕಾರ್ತಿಕ ನಾಯಕ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ಧಾರೆ. ಜಯಶಾಲಿಯಾದ ಎಲ್ಲಾ ಕ್ರೀಡಾಪಟುಗಳು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

Top