logo
add image
Blog single photo

ಮುಂಡವಾಡ :ಸ್ವಯಂ ಸೇವಾ ಸಂಘವನ್ನು ಕಟ್ಟಲು ಮುಂದಾದ ಯುವಕರು

ಮುಂಡವಾಡ :ನಿಜವಾದ "ಸ್ವಚ್ಛ್ ಭಾರತ್" ಬುಧವಾರ ದಿನಾಂಕ 05-09-2018 ಮುಂಡವಾಡ ಗ್ರಾಮದಲ್ಲಿ ಕಂಡು ಬಂದಿದೆ.ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದಲ್ಲಿ ಯವ್ವನದ ಯುವಕರು ಸ್ವಯಂ ಸೇವಾ ಸಂಘವನ್ನು ಕಟ್ಟಲು ಮುಂದಾಗಿದ್ದಾರೆ. ಪ್ರತಿದಿನ ಮುಂಜಾನೆ ಒಂದು ಗಂಟೆ ಮತ್ತು ಸಂಜೆ ಒಂದು ಗಂಟೆಯಲ್ಲಿ ಗ್ರಾಮದ ಸ್ವಚ್ಛತೆಯಲ್ಲಿ ತೊಡಗಿದ್ದಾರೆ, ಇದನ್ನು ಗಮನಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀ ಶಿವಾಜಿ ಹೂವಪ್ಪನವರ್ ಅವರು ಸಹಾಯ ಮಾಡಲು ಮುಂದಾಗಿದ್ದಾರೆ.ಜೈವಂತ್ ಗರಗ ,ರಾಹುಲ್ ಧಳವಿ,ಮಂಜು ,ನಾಗ ,ವಿನಾಯಕ ,ಶಿವಾಜಿ ,ಸಚಿನ್ ,ಸಾಯಿರಾಂ ,ಕುಮಾರ್ ,ಸಂದೇಶ, ನವೀನ ಹೀಗೆ ಇನ್ನು ಹೆಚ್ಚಿನ ಯುವಕರು ಗ್ರಾಮದ ಸ್ವಚ್ಛತೆಯಲ್ಲಿ ಪಾಲ್ಕೊಂಡಿದ್ದಾರೆ.

ಈ ಯುವಕರು ಹೀಗೆ ತಮ್ಮ ಕಾರ್ಯವನ್ನು ಮುಂದುವರೆಸಿದರೆ "ಸ್ವಚ್ಛ ಭಾರತ್" ಎನ್ನುವ ಮಾತು ನಿಜವಾಗಬಹುದು ಎಂದು ನಮ್ಮ ಆಸೆ. ನಿಮ್ಮ ಸ್ವಯಂ ಸೇವಾ ಸಂಘಕ್ಕೆ ನಮ್ಮ Hdexpressnews ಇಂದ ಯಾವಾಗಲೂ ಬೆಂಬಲ ಇರುತ್ತದೆ.

Top