logo
add image
Blog single photo

ಹಳಿಯಾಳ : ಪಿಓಪಿ ಯಿಂದ ತಯಾರಿಸಿದ ಗಣೇಶ ವಿಗ್ರಹ ಮಾರಾಟ ನಿಷೇಧ

ಹಳಿಯಾಳ : ಪ್ಲಾಸ್ಟರ್ ಓಫ್ ಪ್ಯಾರಿಸ್(ಪಿಓಪಿ) ಗಣೇಶ ವಿಗ್ರಹವನ್ನು ಮಾರಾಟ ಮಾಡುವುದು ದೇಶಾದ್ಯಂತ ನಿಷೇದಿಸಲಾಗಿದೆ.ಆದರೆ ಹಳಿಯಾಳ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಪಿಓಪಿ ಗಣೇಶ ವಿಗ್ರಹವನ್ನು ಅವ್ಯವಹಾರವಾಗಿ ಮಾರಾಟ ಮಾಡುತಿದ್ದರೆ. ಇದನ್ನು ಖಂಡಿಸಿ, ಇದರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹಳಿಯಾಳದ ಜಯ ಕರ್ನಾಟಕ ಸಂಘಟನೆ ಮನವಿ ಮಾಡಿಕೊಂಡಿದೆ. ತಾಲೂಕಿನ ಬಿದ್ರೋಳ್ಳಿ ಗ್ರಾಮದಲ್ಲಿ ನೂರಾರು ಪಿಓಪಿ ವಿಗ್ರಹವನ್ನು ತಯಾರಿಸಿದ್ದಾರೆ .ಇದರ ಮೇಲು ಕ್ರಮ ತೆಗೆದುಕೊಳ್ಳಬೇಕು ಎಂದು ತಹಶೀಲ್ದಾರ ಅವರ ಹತ್ತಿರ ಮನವಿ ಮಾಡಿಕೊಂಡಿದ್ದಾರೆ.

ತಾಲೂಕಾಧ್ಯಕ್ಷ ವಿಲಾಸ ಕಣಗಲಿ, ಪದಾಧಿಕಾರಿಗಳಾದ ಶಿರಾಜ ಮುನವಳ್ಳಿ, ಗಣೇಶ ಗೊಸಪ್ಪನವರ, ಸಂಜು ಚಲವಾದಿ, ಮಹೇಶ ಹುಲಕೊಪ್ಪ, ಪವನ ಹಳ್ಳುರ, ಪರಶುರಾಮ, ವಿನೋದ, ಸಿಕಂದರ ಮುಲ್ಲಾ, ಚೇತನ ಇತರರು ಕೂಡಿ ಮನವಿ ಕೊಟ್ಟಿದ್ದಾರೆ. #haliyalanews

Top